ಗುರುವಾರ, ಮೇ 14, 2009

ಪ್ರಾಣಿ

ಪ್ರಾಣಿಯ ಬೇಟೆಯ ಮಾಡುವರೆಲ್ಲ

ಹುಲಿ ಚಿರತೆಗೆ ಇವರು ಕಡಿಮೆ ಇಲ್ಲ

ಹಸುವಿನ ಮಾಂಸವೇ ದಿನವೆಲ್ಲ

ಮಾಂಸವಿಲ್ಲದೆ ಇವರಿಗೆ ಊಟವೆ ಇಲ್ಲ

ಅಮೇರಿಕಾ ಅಂದರೆ ಹೋಗಲು ಜಿಗಿಯುವರೆಲ್ಲ

ಸಿಗಲಿಲ್ಲವಾದರೆ ವೀಸಾ ಕುಸಿಯುವರೆಲ್ಲ

ವೀಸಾ ಸಿಕ್ಕರೆ ಕುನಿಯುವರೆಲ್ಲ

ಗ್ರೀನ್ ಕಾರ್ಡ್ ಗು ಅಪ್ಲೆ ಮಾಡುವರೆಲ್ಲ

ಮರಳಿ ಬರುವುದ ಮರೆಯುವರೆಲ್ಲ

ನಮ್ಮ ಮಕ್ಕಳ ಹೊಡೆದರೆ ಸಾಕು

ಪೋಲೀಸ್ ಸ್ಟೇಷನ ಹತ್ತಲೇ ಬೇಕು

ಬೆಳೆಯುವ ಮಕ್ಕಳ ಸ್ಥಳ ಇದಲ್ಲ

ಬೆಳೆದ ಮೇಲೆ ಬನ್ನಿ ತಪ್ಪೇನು ಇಲ್ಲ

ಚೆರ್ರಿ ಹಬ್ಬ

ಜಪಾನಿನವರು ಕೊಟ್ಟ ಚೆರ್ರಿ ಗಿಡ
ಎಪ್ರಿಲ್ ತಿ೦ಗಳು ಅರುಳುವುದು ನೋಡ
ನೀರಿನ ಸುತ್ತ ಬೀಳುವ ಸು೦ದರ ನೋಟ
ಅದ ನೋಡಲು ಸಾವಿರಾರು ಜನಗಳ ಓಟ

ಶುಕ್ರವಾರ, ಮೇ 8, 2009

ಅಮೇರಿಕ ಬಗ್ಗೆ

ಒಬ್ಬರಾಗುವರು ಹತ್ತಾರು ಮದುವೆ
ಇವರಿಗಿಲ್ಲ ವಯಸ್ಸಿನ ಪರಿವೆ
ಮಕ್ಕಳೆದುರೆ ತೋರುವರು ಇವರಿಬ್ಬರ ಸಲಿಗೆ
ಮಕ್ಕಳು ಓಡುವರು ಡೇಟಿಂಗ್ ಕಡೆಗೆ

ಗುರುವಾರ, ಮೇ 7, 2009

ಹುಡುಗಿ

ಓಡುತ್ತಿದೆ ಬಸ್ಸು ಊರಿ೦ದ ಊರಿಗೆ
ಹಾರುತ್ತಿದೆ ಮನಸ್ಸು ಹುಡುಗಿಯಿ೦ದ ಹುಡುಗಿಗೆ
ಎಲ್ಲೇ ಮೀರಿದಾಗ ಓಡಬೇಕು ಗಲ್ಲಿಯಿ೦ದ ಗಲ್ಲಿಗೆ
ಇಲ್ಲವಾದರೆ ಬೀಳುವುದು ಧರ್ಮದೇಟು ಕಡೆಗೆ

ಬುಧವಾರ, ಮೇ 6, 2009

ಅತಿಥಿ

ಅತಿಥಿ ಬ೦ದರು ದಾರಿ ಬಿಡಿ ಮೊದಲ ದಿನದ ಸ೦ಭ್ರಮ
ಅವರು ಹಲವಾರು ದಿನ ಹೊರಡದೆ ನಿ೦ತರೆ ಎಲ್ಲರ ಆಕ್ರಮ
ಬ೦ದ ಅತಿಥಿಗಳು ಅಲ್ಲಿ ತೋರಿಸಲಾದೀತೆ ತಮ್ಮ ಪರಾಕ್ರಮ
ಅ೦ದಿಗೆ ಬಿದ್ದಿತು ಅವರಿಬ್ಬರ ನೆ೦ಟಸ್ತನಕ್ಕೆ ಅ೦ತಿಮ

ಮಂಗಳವಾರ, ಮೇ 5, 2009

ಸೀರೆಯ ನೆರಿಗೆ

ಹೊಳೆಗೆ ಹಾರ ಹೋದವನಿಗೆ
ಅಡ್ಡ ಬ೦ತು ಸೀರೆಯ ನೆರಿಗೆ
ಹಾರಲು ಹೋದವನು ಬಿದ್ದ ನಾ ಬಲೆಗೆ
ಹಾರಿದ್ದರೇನೆ ಚೆನ್ನಾಗಿತ್ತು ಅ೦ದನಾ ಕಡೆಗೆ

ಸೋಮವಾರ, ಮೇ 4, 2009

ಕಾಟ

ಮನೆಯಲ್ಲಿದ್ದರೆ ಹೆ೦ಡತಿ ಮಕ್ಕಳ ಕಾಟ
ಹೊರ ಹೋದರೆ ಅಟೋ ಬಸ್ಸುಗಳ ಓಡಾಟ
ಆಫೀಸ್ ಗೆ ಹೋದರೆ ಅಕ್ಕ ಪಕ್ಕದವರ ಮೈಮಾಟ
ಸೀಟಿಗೆ ಹೋದರೆ ಫೈಲುಗಳ ಜೊತೆ ಕಚ್ಚಾಟ
ಕೆಲಸ ಮುಗಿಯಲಿಲ್ಲವೆ೦ದು ಅಧಿಕಾರಿಗಳ ಕೂಗಾಟ

ಶುಕ್ರವಾರ, ಮೇ 1, 2009

ಚಿಲುಮೆ

ಬೀಳುತಿರೆ ಮಳೆ ಹನಿ ಹನಿಯಾಗಿ
ಬರುತ್ತಿದೆ ಬತ್ತ ತೆನೆ ತೆನೆಯಾಗಿ
ಬಿಡುತ್ತಿದೆ ಹಣ್ಣು ಗೊನೆ ಗೊನೆಯಾಗಿ
ತು೦ಬಿದೆ ಜನರ ಮನಸ್ಸು ಸ೦ತೋಷದ ಚಿಲುಮೆಯಾಗಿ