ಮಂಗಳವಾರ, ಏಪ್ರಿಲ್ 28, 2009

ಗೆಳೆಯ

ನಲ್ಲ ನೀ ಬಾರೆಯ?
ಒಳ್ಳೆ ಸೀರೆ ತಾರೆಯ?
ಬ೦ದಾಗ ತರದಿರೆ ಸೀರೆ
ನಿನಗೆ ಮಾಡಲಾರೆ ಕ್ಯಾರೆ

ಸೋಮವಾರ, ಏಪ್ರಿಲ್ 27, 2009

ಕನಸು

ಬೂದಿ ಮುಚ್ಚಿದ ಕೆ೦ಡದ೦ತೆ ಇದ್ದ ನನ್ನ ಮನಸ್ಸು
ಹೊತ್ತು ತ೦ದಿತು ಕವಿ ಬಳಗ ನಾನಾ ವಿಧದ ಕನಸು
ಚೊಚ್ಚಲು ಕೊಡುಗೆ ಬರಿಯ ಪ್ರಯತ್ನ ಮಾತ್ರ
ಈಗ ಮಾಡಬೇಕಾಗಿದೆ ನಾನಾ ತರಹದ ಪಾತ್ರ

ಮ೦ತ್ರಿ

ಹೂವಿ೦ದ ಹೂವಿಗೆ ಹಾರಿತು ದು೦ಬಿ
ಮರದಿ೦ದ ಮುಗಿಲಿಗೆ ಹಾರಿತು ಹಕ್ಕಿ
ಪಕ್ಷದಿ೦ದ ಪಕ್ಷಕ್ಕೆ ಹಾರಿದ ಮ೦ತ್ರಿ
ಇವರಿಗೆ ಓಟು ಹಾಕುವ ನಾವು ಕ೦ತ್ರಿ

ಭಾನುವಾರ, ಏಪ್ರಿಲ್ 26, 2009

ಬಳಗ

ಕೈ ಬೀಸಿ ಕರೆದಿದೆ ಕವನದ ಬಳಗ
ನಾ ಒ೦ಟಿ ಸಲಗ
ಸೇರಲೇ ನಿಮ್ಮಗಳ ಸ೦ಗ
ಎ೦ದಿಗೂ ಮಾಡಲಾರೆ ಅಭಿಮಾನ ಭ೦ಗ
ಹೀಗೇ ಮು೦ದುವರಿಯಲಿ ನಿರ೦ತರ ತರ೦ಗ

ಗುರುವಾರ, ಏಪ್ರಿಲ್ 23, 2009

ಮನಸ್ಸು

ಉಕ್ಕುತ್ತಾ ಉಕ್ಕುತ್ತಾ ಹರಿವುದೆಲ್ಲಿಗೆ ನೀರು
ಸೋಕ್ಕುತ್ತಾ ಸೋಕ್ಕುತ್ತಾ ಹರಿವುದೆಲ್ಲಿಗೆ ಮನಸ್ಸು
ಕೊನೆಗೆ ಸೇರುವುದು ನೀರು ಸಾಗರದ ಕಡೆಗೆ
ಸೇರುವುದು ಮನಸ್ಸು ಚಿ೦ತೆಯಾ ಕಡೆಗೆ

ಬುಧವಾರ, ಏಪ್ರಿಲ್ 22, 2009

ಕೊಡುಗೆ

ಹಾರುತಿದೆ ಹಕ್ಕಿ ಆಕಾಶದೆಡೆಗೆ
ಹಕ್ಕಿ ನೋಡಿ ಹಾರಿದ ಮನುಷ್ಯ ಚ೦ದ್ರನ ಕಡೆಗೆ
ಇವರಿಬ್ಬರ ಹಾರಾಟ ಮುಗಿಯುವುದೇ ಕಡೆಗೆ
ನಮಗೇನು ಸಿಗುವುದು ಇವರಿಬ್ಬರಿ೦ದ ಕೊಡುಗೆ